ಇಸಬು  -
 	ತುಂಬಾ ಕೆರೆತವಿರುವ, ಉರಿಯುವ, ಉರಿತದ (ಇನ್‍ಫ್ಲೆಮೇಟರಿ), ಆದರೆ ಇನ್ನೊಬ್ಬರಿಗೆ ಅಂಟದ, ಚರ್ಮರೋಗ (ಎಕ್ಜೀಮ). ಕೂರಾಗೋ (ಅಕ್ಯೂಟ್), ಬೇರೂರಿಯೋ (ಕ್ರಾನಿಕ್), ಇವೆರಡರ ನಡುವೆಯೋ ಇದ್ದು ಮಿಟ್ಟಿದದ್ದು (ಪ್ಯಾಪ್ಯೂಲ್). ನೀರ್ಗುಳ್ಳೆ (ವೆಸಿಕಲ್), ಕೀವ್ಗುಳ್ಳೆಗಳೊಂದಿಗೆ (ಪುಸ್ಚೂಲ್ಸ್), ಕೆಂಗಂದೆಯಂತೆ (ಎರಿತೀಮಾ)-ಮೊದಲಾಗಿ, ಹಕ್ಕು (ಸ್ಕ್ಯಾಬ್), ಹಗರು (ಸ್ಕೇಲ್ಸ್), ಹೆಕ್ಕಳಿಕೆ (ಕ್ರಸ್ಟ್‍ಸ್) ಏಳಬಹುದು. ಒಣಗಿರಬಹುದು ಇಲ್ಲವೇ ನೀರಾಡುತ್ತ ತೇವಗೂಡಿ ತುರಿಸಬಹುದು. ಬರಬರುತ್ತ ಚರ್ಮಗಡುಸು ಗಟ್ಟುತ್ತದೆ. ರೋಗ ಎನ್ನುವುದಕ್ಕಿಂತ ಇದನ್ನು ಒಂದು ರೋಗಲಕ್ಷಣ ಎನ್ನಬಹುದು.
 (ನೋಡಿ- ಚರ್ಮರೋಗಗಳು)									
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ